January 11, 2026

ತಮ್ಮ ಆಕ್ರೋಶದ ಹೇಳಿಕೆಯನ್ನ ವಾಪಸ್ ಪಡೆದ ತೀ. ನಾ .ಶ್ರೀನಿವಾಸ್:

ಸಾಗರ: ಕಾಂಗ್ರೆಸ್ ಪಕ್ಷ ಬಗರಹುಕುಂ ಸಾಗುವಳಿ ಮಂಜೂರಾತಿಗಾಗಿ11/8/21ರಂದು  ನಡೆಸಿದ ಪ್ರತಿಭಟನೆ ವೇಳೆ ಮಾಜಿ ಪುರಸಭಾಧ್ಯಕ್ಷ  ತೀ ನಾ ಶ್ರೀನಿವಾಸ್ ಬಿಜೆಪಿ ನಾಯಕರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದರು ಎಂದು ಆರೋಪಿಸಿ ಸಾಗರ ಬಿಜೆಪಿ ಘಟಕ ದಿನಾಂಕ12/8/21 ರಂದು ಪ್ರತಿಭಟನೆ ನಡೆಸಿತ್ತು

ಇಂದು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿರುವ ಮಾಜಿ ಪುರಸಭಾ ಅಧ್ಯಕ್ಷ ತೀ ನಾ ಶ್ರೀನಿವಾಸ್ ನಾನು ಯಾವುದೇ ನಾಯಕರನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ ಸಂಕಷ್ಟದಲ್ಲಿರುವ ರೈತರ ಸ್ಥಿತಿಗತಿ ಮತ್ತು ಜನಸಾಮಾನ್ಯರ ಪರಿಸ್ಥಿತಿಯಿಂದ ಆಕ್ರೋಶಗೊಂಡು ಮಾತನಾಡಿದ್ದು ಅಷ್ಟೆ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಆದರೂ ನಾನು ಇಷ್ಟು ವರ್ಷಗಳ ಕಾಲ ಸಾಮಾಜಿಕ ಜೀವನದಲ್ಲಿ ಇರುವುದರಿಂದ ನಾನು ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ತಿಳಿಸಿದರು





ವರದಿ: ಧರ್ಮರಾಜ್ ಜಿ

About The Author

Leave a Reply

Your email address will not be published. Required fields are marked *

Exit mobile version