January 11, 2026

ಕಾಂಗ್ರೆಸ್‌ನವರು ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾರೆ‘ ಎಂಬ ಹೇಳಿಕೆ ಹಿಂಪಡೆಯುವೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಆನೇಕಲ್: ‘ರೇಪ್ ಆಗಿದ್ದು ಅಲ್ಲಿ, ಕಾಂಗ್ರೆಸ್‌ನವರು ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾರೆ’ ಎಂಬ ಮಾತನ್ನು ಹಿಂಪಡೆಯುವುದಾಗಿ ಸೆಂಟ್ರಲ್ ಜೈಲಿನ ಬಳಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ನನಗೆ ಬಹಳ ಆತಂಕ ಆಗಿತ್ತು, ಆತಂಕದಲ್ಲಿ ಈ ಮಾತು ಹೇಳಿದ್ದೆ. ನಾನು ನೀಡಿದ್ದ ಹೇಳಿಕೆ ಹಿಂಪಡೆಯುತ್ತೇನೆ. ಸಂತ್ರಸ್ತೆಯನ್ನು ನನ್ನ ಮಗಳ ಸ್ಥಾನದಲ್ಲಿ ನೋಡುವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಈ ಮಾತು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನವರು ಗೃಹ ಸಚಿವರ ಮೇಲೆ ರೇಪ್ ಮಾಡ್ತಿದ್ದಾರೆ ಎಂದು ಅವರ ಮನಸ್ಸಿಗೆ ನೋವು ಮಾಡುವುದಕ್ಕೆ ಈ ಮಾತು ಹೇಳಿಲ್ಲ. ತಮಾಷೆ ರೀತಿಯಲ್ಲಿ ಮಾತಾಡಿದ್ದೇನೆ ಎಂದು ತಿದ್ದಿಕೊಂಡಿದ್ದರು.

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ನವರು ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿದ್ದಾರೆ. ಅತ್ಯಾಚಾರ ಆಗಿದ್ದು ಅಲ್ಲಿ, ಆದರೆ ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡ್ತಿದ್ದಾರೆ’ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲಿ ಆಗಿರುವುದು ಅಮಾನುಷವಾದ ಕೆಲಸ. ಅದನ್ನು ಮಾನವೀಯ ದೃಷ್ಟಿಯಿಂದ ನೋಡಿ, ಡಿಟೆಕ್ಟ್ ಮಾಡಿ ಅನ್ನಬೇಕು. ಕಾಂಗ್ರೆಸ್​ನವರು ಹಾಗೆ ಮಾಡದೇ ನನ್ನ ಮೇಲೆ ಹರಿಹಾಯುತ್ತಿದ್ದಾರೆ. ಈ ಪ್ರಕರಣದಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದು ಅವರು ಕಿಡಿಕಾರಿದ್ದರು.

ಆ ಯುವಕ, ಯುವತಿ ಸಂಜೆ 7.30ರ ವೇಳೆಗೆ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು. ಆದರೆ ಹೋಗಬೇಡಿ ಅಂತಾ ತಡೆಯೋದಕ್ಕೂ ಆಗೋದಿಲ್ಲ. ಸದ್ಯಕ್ಕೆ ಯುವಕ,ಯುವತಿ ಶಾಕ್​ನಲ್ಲಿ ಇದ್ದಾರೆ. ಅವರ ಸಂಪೂರ್ಣ ಸ್ಟೇಟ್ ಮೆಂಟ್ ಪಡೆಯಲು ಆಗಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಎಂದು ಸಹ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ತಮ್ಮ ಈ ಮಾತು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನವರು ಗೃಹ ಸಚಿವರ ಮೇಲೆ ರೇಪ್ ಮಾಡ್ತಿದ್ದಾರೆ ಎಂದು ಅವರ ಮನಸ್ಸಿಗೆ ನೋವು ಮಾಡುವುದಕ್ಕೆ ಈ ಮಾತು ಹೇಳಿಲ್ಲ. ತಮಾಷೆ ರೀತಿಯಲ್ಲಿ ಮಾತಾಡಿದ್ದೇನೆ ಎಂದು ತಿದ್ದಿಕೊಂಡಿದ್ದರು. ಘಟನೆಗೆ ಯಾರು ಕಾರಣ ಅವರನ್ನ ಹಿಡಿಯುತ್ತೇವೆ. 12 ಗಂಟೆಯಲ್ಲಿ FIR ಆಗಿದೆ. ಆರೋಪಿಗಳನ್ನ ಬಂಧಿಸುತ್ತೇವೆ ಎಂದು ಹೇಳಿದ್ದರು.

About The Author

Leave a Reply

Your email address will not be published. Required fields are marked *

Exit mobile version