January 11, 2026

ಸೊರಬ ತಾಲೂಕಿನಲ್ಲಿ ಮಳೆಯ ಅಬ್ಬರ : ಹಲವೆಡೆ ಪ್ರವಾಹ

ಸೊರಬ:ತಾಲ್ಲೂಕಿನಲ್ಲಿ ಇಂದು ವರುಣನ ಅಬ್ಬರ ಹೆಚ್ವಾಗಿದ್ದು ಹಲವು ಭಾಗಗಳಲ್ಲಿ ಮನೆ, ಕೃಷಿ ಭೂಮಿ ಹಾಗೂ ರಸ್ತೆಗಳು ಜಲಾವೃತಗೊಂಡಿದ್ದು ಇಡೀ ತಾಲ್ಲೂಕಿನಲ್ಲಿ ಪ್ರವಾಹವನ್ನು ಸ್ರಷ್ಟಿಸಿದೆ.
ಚಂದ್ರಗುತ್ತಿಯ ವರದಾನದಿ,ಸೊರಬದ ಗೌರಿ ಕೆರೆ,ಚನ್ನಪಟ್ಟಣ ಸೇತುವೆ,ಕಡಸೂರ್ ರಸ್ತೆ,ಕತವಾಯಿ ಸೇತುವೆ ಮುಳುಗಡೆಯಾಗಿವೆ, ಇದರಿಂದ ಸಂಪರ್ಕ ರಸ್ತಗಳು ಸಂಪೂರ್ಣವಾಗಿ ಬಂದ್ ಆಗಿ ರಸ್ತೆಗಳಮೇಲೆ  ಅಪಾಯದಮಟ್ಟ  ಮೀರಿ ನೀರು ಹರಿಯುತ್ತಿದ್ದು ವಾಹನಗಳು ಸಂಚರಿಸದಂತೆ  ಸೊರಬ ಪೋಲೀಸ್ ಇಲಾಖೆಯವರು ರಸ್ತೆಗೆ ಅಡ್ಡವಾಗಿ  ಬ್ಯಾರಿಕೇಡ್ ಅಳವಡಿಸಿದ್ದಾರೆ, ಹಾಗೂ ಯಾವುದೇ ರೀತಿಯ  ಅನಾಹುತ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಸೊರಬ ಪಿಎಸ್ಐ ಆದ ಪ್ರಶಾಂತ್ ರವರು ಕಾನ್ ಸ್ಟೆಬಲ್ ಮಂಜುನಾಥ್, ದಪೇದಾರ್ ಕುಮಾರ್, ಹಾಗೂ ಗ್ರಾಮ ಪಂಚಾಯತ್ ಸದ್ಯಸರಾದ ಸಲೀಮ್,  ಗ್ರಾಮಸ್ಥರಾದ ದಿನೇಶ್, ಜಗದೀಶ್,ಮುಖಂಡರಾದ  ಪ್ರಸನ್ನ  ಶೇಟ್, ಪ್ರವೀಣ್, ದೇವರಾಜ್ ಮತ್ತಿತರು ಇದ್ದರು..





ವರದಿ : ವೆಂಕಟೇಶ್ ಚಂದ್ರಗುತ್ತಿ
      ಪೋ:9845783961



ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

About The Author

Leave a Reply

Your email address will not be published. Required fields are marked *

Exit mobile version