January 11, 2026

ಮಾನವೀಯತೆ ಮರೆತಿದ್ದಾರೆ ಸಾಗರದ ಶಾಸಕರು: ಬೇಳೂರು ಗೋಪಾಲಕೃಷ್ಣ

ಆನಂದಪುರ:ಕಿಟ್ ಹಾಗೂ ಕೊರೊನಾ ಲಸಿಕೆ ನೀಡುವಲ್ಲಿ  ಸಾರ್ವಜನಿಕರಿಗೆ ವಂಚಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ರವರು ಶಾಸಕ ಹರತಾಳು ಹಾಲಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಾಗರ ತಾಲೂಕಿನ ಆನಂದಪುರದಲ್ಲಿ ಕಿಟ್ ನೀಡುವ ಸಭೆಯಲ್ಲಿ ಭಾಗವಹಿಸಿದಂತಹ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಸಾಗರದ ಶಾಸಕರು ಇದೀಗ ಮಾನವೀಯತೆಯನ್ನು ಮರೆತಿದ್ದಾರೆ ಕೇವಲ ತಮ್ಮ ಕಾರ್ಯಕರ್ತರಿಗೆ ಕಿಟ್ಟನ್ನು ನೀಡುವಲ್ಲಿ ಹಾಗೂ ಕೊರೋನಾ ಲಸಿಕೆ ಕೊಡಿಸುವತ್ತ ಗಮನ ಹರಿಸುತ್ತಿದ್ದಾರೆ ಇನ್ನುಳಿದ ಜನರು ಬದುಕುವ ಹಾಗೆಯೇ ಇಲ್ಲವೇ ಎಂದು ಹರಿಹಾಯ್ದರು.
ಶಾಸಕರು ತಾಲ್ಲೂಕಿನ ಸಮಗ್ರ ಜನತೆಯ ಬಗ್ಗೆ ಕಾಳಜಿ ವಹಿಸಬೇಕು ಕೇವಲ ತಮ್ಮ ಪಕ್ಷದವರನ್ನೇ ಮಾತ್ರ ಗಮನಿಸಿ ಕೊಳ್ಳುತ್ತಿದ್ದಾರೆ ಇದು ರಾಜಕೀಯದಲ್ಲಿ ಸರಿಯಾದ ವ್ಯಕ್ತಿತ್ವ ಅಲ್ಲ.
ಜನರಿಗೆ ಧೈರ್ಯ ತುಂಬುವ ಕೆಲಸವನ್ನು ಶಾಸಕರಾದವರು ಇದುವರೆಗೂ ಮಾಡಲೇ ಇಲ್ಲ ಕೇವಲ ಸಭೆಗಳನ್ನು ಸಮಾರಂಭಗಳನ್ನು ನಡೆಸಿ ಕಾಲ ಕಳೆದಿದ್ದಾರೆ ಎಂದರು.

ಕೊರೊನಾ ಎರಡನೇ ಅಲೆಯ ಬಗ್ಗೆ ಸರ್ಕಾರ ಸರಿಯಾದ ಪೂರ್ವಬಾವಿ ಯೋಜನೆಯನ್ನು ರೂಪಿಸದೆ ಸಾವಿರಾರು ಜನರು ಸಾಯುವಂತೆ ಮಾಡಿದರೆ ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಸರ್ಕಾರದ ವಿರುದ್ಧವೂ ಸಹ ಗುಡುಗಿದರು.



ವರದಿ: ಪವನ್ ಕುಮಾರ್.ಕಠಾರೆ.

ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..



About The Author

Leave a Reply

Your email address will not be published. Required fields are marked *

Exit mobile version