January 11, 2026

ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ,ಜನರ ಪರದಾಟ…!

ರಿಪ್ಪನ್ ಪೇಟೆ :: ಆಹಾರ ಇಲಾಖೆಯ ಸರ್ವರ್ ಸಮಸ್ಯೆಯಿಂದಾಗಿ ಒಂದು ವಾರಗಳಿಂದ ಪಡಿತರ ಪಡೆಯಲು ಸಾಧ್ಯವಾಗದೇ ಕಾರ್ಡುದಾರರು ಪರದಾಡುತ್ತಿದ್ದಾರೆ.ನ್ಯಾಯಬೆಲೆ ಅಂಗಡಿ ಮುಂದೆ ದಿನವಿಡೀ ಕಾದರೂ ಪಡಿತರ ಸಿಗದೇ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಅಕ್ರಮ ತಡೆಯಲು ಲೆಡ್ಜರ್ ವಿತರಣಾ ವ್ಯವಸ್ಥೆ ಬದಲಾಗಿ  ಬಯೋಮೆಟ್ರಿಕ್ ಪದ್ಧತಿಯಲ್ಲಿ ಕಾರ್ಡುದಾರರ ಹೆಬ್ಬೆರಳ ಗುರುತು ಪತ್ತೆ ಮಾಡಿ ಆಹಾರ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ ಪೂರಕವಾದ ತಾಂತ್ರಿಕ ವ್ಯವಸ್ಥೆ ರೂಪಿಸದ ಕಾರಣ ಸರ್ವರ್ ಮೇಲೆ ಒತ್ತಡ ಬಿದ್ದು ಪದೇ ಪದೇ ಕೈಕೊಡುತ್ತಿದೆ.
ಪಟ್ಟಣದ ಸುತ್ತಮುತ್ತ ಹಳ್ಳಿಗಳಿಂದ ಬರುವಂತಹ ಕಾರ್ಡುದಾರರಿಗೆ ಸರ್ವರ್ ನ ತಾಂತ್ರಿಕ ದೋಷದಿಂದ ಪಡಿತರ ಸಿಗದೇ ಬಡವರು ಕೂಲಿ ಕಾರ್ಮಿಕರು ದೈನಂದಿನ ಕೆಲಸ ಕಾರ್ಯ ಬಿಟ್ಟು ನ್ಯಾಯ ಬೆಲೆ ಅಂಗಡಿ ಮುಂದೆ ನಿಲ್ಲುವಂತಾಗಿದೆ.ಕೂಡಲೇ ಆಹಾರ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.

ವರದಿ: ರಾಮನಾಥ್ ರಿಪ್ಪನ್ ಪೇಟೆ



ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

About The Author

Leave a Reply

Your email address will not be published. Required fields are marked *

Exit mobile version