January 11, 2026

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ:

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಗಾಜಿನಗೋಡು ಗ್ರಾಮದ ನಿವಾಸಿ, ಹೊಸನಗರ ತಾಲೂಕು ಗಂಗಾಮತಸ್ಥ ಸಂಘದ ಮಾಜಿ ನಿರ್ದೇಶಕ ಕೊಲ್ಲಪ್ಪ ಇವರು ಕೂಲಿ ಕೆಲಸಕ್ಕೆಂದು ಮೂರು ದಿನಗಳ ಹಿಂದೆ ಹೋದವರು ಇಂದು ಗಾಜಿನಗೋಡು ಸಮೀಪ ಕುಮದ್ವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕಳೆದ ಮೂರು ನಾಲ್ಕು ದಿನದಿಂದ ಬರುತ್ತಿರುವ ಅತಿಯಾದ ಮಳೆಗೆ ಕುಮದ್ವತಿ ನದಿ ಹರಿಯುತ್ತಿದ್ದು ಕಾಲುಜಾರಿ ಬಿದ್ದಿರಬಹುದೆಂದು ಊಹಿಸಲಾಗಿದೆ. ಗಾಜಿನ ಗೋಡು ಮತ್ತು  ಹಾರಂಬಳ್ಳಿ ಮಧ್ಯೆ ಹರಿಯುತ್ತಿರುವ ನದಿ ಇದಾಗಿದ್ದು ಕೂಲಿಯೂ ಸೇರಿದಂತೆ ಬೇರೆ ಬೇರೆ ಕೆಲಸ ಕಾರ್ಯಗಳಿಗಾಗಿ ಜನರು ನದಿಯ ಆಸುಪಾಸಿನ ಗ್ರಾಮಗಳಿಗೆ ತಿರುಗಾಡುವುದು ಸರ್ವೇಸಾಮಾನ್ಯವಾದ ಸಂಗತಿಯಾಗಿದ್ದು. ಆದರೆ ಮೂರು ದಿನದ ಹಿಂದೆ ಕೂಲಿ ಕೆಲಸಕ್ಕೆಂದು ಹೋದವರು ಮನೆಗೆ ಬಾರದೆ ಇದ್ದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ. ಮೃತರು ಪತ್ನಿ ಓರ್ವ ಸಾಕು ಮಗಳನ್ನು ಹೊಂದಿದ್ದಾರೆ.

ರಿಪ್ಪನ್ ಪೇಟೆ ಪೊಲೀಸ್ ಠಾಣೆ ಎಎಸ್ಐ ಗಣಪತಿಯವರ ನೇತೃತ್ವದಲ್ಲಿ ಶವಪರೀಕ್ಷೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ:ರಾಮನಾಥ್



About The Author

Leave a Reply

Your email address will not be published. Required fields are marked *

Exit mobile version