January 11, 2026

ಜೀವನದ ಕೊನೆ ಕ್ಷಣದವರೆಗೂ ಸಮಾಜ ಸೇವೆಗೆ ಸಿದ್ಧ : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

ಆನಂದಪುರಂ: ಇಲ್ಲಿನ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ  ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ. ಜೀವನದ ಕೊನೆ ಕ್ಷಣದವರೆಗೂ ಸಮಾಜಸೇವೆ ಮಾಡಲು ಸಿದ್ಧ.ಕೊವಿಡ್ ಸಂದರ್ಭದಲ್ಲಿ ಸರ್ಕಾರ ಅತೀ  ಹೆಚ್ಚಿನ ಗಮನ ಕೊಡಬೇಕಿತ್ತು, ಸರ್ಕಾರ ಅತಿ ಹೆಚ್ಚಿನ ಒತ್ತು ಕೊಟ್ಟಿಲ್ಲ , ಆದ್ದರಿಂದ ಹಲವರು ನೊಂದಿದ್ದಾರೆ,ಕಷ್ಟದಲ್ಲಿದ್ದಾರೆ. ಸಮಾಜದಲ್ಲಿ ಇನ್ನೂ ಕಡುಬಡವರಿದ್ದಾರೆ. ಅಂತಹವರನ್ನು ಗುರುತಿಸುವ ಕಾರ್ಯ ನಡೆಯಬೇಕು ಎಂದರು.

ಕರೋನದ ಫ್ರಂಟ್ ಲೈನ್ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕ್ಷೌರಿಕರು, ಆಟೋ ಚಾಲಕರು, ಪತ್ರಿಕಾ ವಿತರಕರು, ಹಮಾಲರು ಇವರನ್ನು ಗುರುತಿಸಿ ಆಹಾರದ ಕಿಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕರೋನಾ ಮಹಾಮಾರಿ ನಮ್ಮ ದೇಶಕ್ಕೆ ಬರಬಾರದು ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದ್ಯಸರು ಅದ ಅನಿತಾ ಕುಮಾರಿ, ಮಾಜಿ ತಾ.ಪಂ.ಸದಸ್ಯರಾದ ಸೋಮಶೇಖರ್ ಲ್ಯಾವಿಗೆರೆ, ಯುವ ಕಾಂಗ್ರೆಸ್ ಅಧ್ಯಕ್ಷರು ಅದ ಅಶೋಕ್ ಬೇಳೂರು , ನಗರಸಭೆ ವಿರೋಧಪಕ್ಷನಾಯಕರಾದ ಗಣಪತಿ ಮಂಡಗಳಲೆ, ಒಬಿಸಿ ಅಧ್ಯಕ್ಷರು ಅದ ಸಂತೋಷ ಸದ್ಗುರು, ಪಣಿ, ಯುವ ನಾಯಕರಾದ ರಮಾನಂದ ಪ್ರೇಮ್ ಕುಮಾರ್, ಉಮೇಶ್, ಆನಂದ ಐಗಿನಬೈಲ್, ರಹಮತ್ತುಲ್ಲಾ, ಪ್ರಕಾಶ್, ಮುರುಘಾಮಠ ರಾಜಣ್ಣ, ಸೋಮೇಶ ಹಾಗೂ ಇನ್ನಿತರ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು..




ವರದಿ: ಪವನ್ ಕುಮಾರ್ ಕಠಾರೆ
         ಪೋ:9632820256



ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

About The Author

Leave a Reply

Your email address will not be published. Required fields are marked *

Exit mobile version