January 11, 2026

ಕಸದ ತೊಟ್ಟಿಯಾದ ಉಳವಿ ಬಸ್ ನಿಲ್ದಾಣ: ಗಾಢ ನಿದ್ರೆಯಲ್ಲಿ ಗ್ರಾಮಾಡಳಿತ.!

ಸೊರಬ: ಇಲ್ಲಿನ ಸಮೀಪದ ಉಳವಿಯ ಬಸ್ ನಿಲ್ದಾಣಕ್ಕೆ ಕಾಲಿಡಲು ಹೆದರುವ ಪರಿಸ್ಥಿತಿ ಪ್ರಯಾಣಿಕರದ್ದು,ಪಟ್ಟಣದಲ್ಲಿರುವ ಬಸ್‌ ನಿಲ್ದಾಣ ಹಾಳು ಕೊಂಪೆಯಂತಾಗಿದ್ದು, ಇದ್ದೂ ಇಲ್ಲದಂತಾಗಿದೆ.

ಸೊರಬಕ್ಕೆ ಹೊಂದಿರುವ ಪಟ್ಟಣಕ್ಕೆ ಅಗತ್ಯ ತಕ್ಕಂತೆ ಬಸ್‌ ನಿಲ್ದಾಣ ಅವಶ್ಯಕತೆ ಇದೆ. ಬೆಳೆಯುತ್ತಿರುವ ಪಟ್ಟಣಕ್ಕೆ ಬಸ್‌ ನಿಲ್ದಾಣದ ಭಾಗ್ಯ ಯಾವಾಗ ಕೂಡಿ ಬರುತ್ತದೆ ಎಂಬ ಪ್ರಶ್ನೆ ಎದುರಾಗಿದೆ.

ಬಸ್ ನಿಲ್ದಾಣದ ಸುತ್ತ ಕಸ ಕಡ್ಡಿ ಹುಲ್ಲು ಬೆಳೆದಿದ್ದು,ಬಸ್ ನಿಲ್ದಾಣಕ್ಕೆ ಹೋಗಲು ಮಾರ್ಗವೇ ಇಲ್ಲದಾಗಿದೆ,ಒಳಗೆ ಬಾಟಲಿ ಕಸ ಕಡ್ಡಿ ಕೆಸರು ತುಂಬಿದೆ, ಬಣ್ಣವಿಲ್ಲದೆ‌ ಸೊರಗುತ್ತಿದೆ,ಪ್ರಯಾಣಿಕರು ಶಾಲಾ ಮಕ್ಕಳು ಬಸ್ ಗಾಗಿ ಅಕ್ಕ ಪಕ್ಕದ ಅಂಗಡಿ ಕಟ್ಟೆಮೇಲೆ ನಿಂತು ಬಸ್ ಹತ್ತಬೇಕಾದ ಪರಿಸ್ಥಿತಿ ಇದೆ.

ಸ್ಥಳೀಯ ಗ್ರಾಮ ಪಂಚಾಯತ್ ನವರು ನಿದ್ದೆ ಯಿಂದ ಎದ್ದು ಈ ಸಮಸ್ಯೆ ಬಗ್ಗೆ ಗಮನಹರಿಸಿ ಬಸ್ ನಿಲ್ದಾಣ ಹಾಗೂ ಚರಂಡಿ ವ್ಯವಸ್ಥೆ ಸರಿಪಡಿಸಬೇಕೆಂದು ಗ್ರಾಮಸ್ಥರ ಬೇಡಿಕೆಯಾಗಿದೆ.





ವರದಿ: ವೆಂಕಟೇಶ್ ಚಂದ್ರಗುತ್ತಿ
            ಪೋ:+919845783961




ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

About The Author

Leave a Reply

Your email address will not be published. Required fields are marked *

Exit mobile version