HOSANAGARA | ಬಸ್ಸು ಮತ್ತು ಕಾರಿನ ನಡುವೆ ಡಿಕ್ಕಿ – ಮೂವರಿಗೆ ಗಾಯ

HOSANAGARA | ಬಸ್ಸು ಮತ್ತು ಕಾರಿನ ನಡುವೆ ಡಿಕ್ಕಿ – ಮೂವರಿಗೆ ಗಾಯ

ಹೊಸನಗರ: ತಾಲೂಕಿನ ಹಿಲ್ಕುಂಜಿ ತಿರುವಿನ ಬಳಿ ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಶಿವಮೊಗ್ಗದಿಂದ ಉಡುಪಿ‌ ಕಡೆ ಹೋಗುತ್ತಿದ್ದ ಖಾಸಗಿ ಬಸ್ಸು, ಮಾರಣಕಟ್ಟೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಕಾರು ಸಂಪೂರ್ಣ ಜಖಂಗೊಂಡಿದೆ ಡಿಕ್ಕಿಯ ಹೊಡೆತಕ್ಕೆ ಕಾರು ಧರೆಯಿಂದ ಕೆಳಗೆ ಬೀಳುವ ಹಂತದಲ್ಲಿತ್ತು ಆದರೆ ಮರದಿಂದಾಗಿ ಕಾರು ಅಲ್ಲೇ ಸ್ಟ್ರಕ್ ಆಗಿತ್ತು.

ಕಾರಿನಲ್ಲಿದ್ದ ಸಾಗರ ತಾಲೂಕಿನ ನಂದಿತಳೆ ನಿವಾಸಿಗಳಾದ ಮುರುಳಿ, ಶಶಿ ಮತ್ತು ನಾಗರಾಜ ಎಂಬುವವರು ಗಾಯಗೊಂಡಿದ್ದರು.
ಬಸ್ಸಿನಲ್ಲಿ‌ ನಗರ ಠಾಣೆ ಎಎಸ್ಐ ಕುಮಾರ್ ಇದ್ದು, ಕೂಡಲೇ ಸ್ಥಳೀಯರ ಸಹಕಾರದಿಂದ ಕಾರಿನಲ್ಲಿದ್ದ ಗಾಯಾಳುಗಳನ್ನು ಕೆಳಗಿಳಿಸಿ ಅಂಬುಲೆನ್ಸ್ ಮೂಲಕ ಹೊಸನಗರ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.