ಬಂಕಾಪುರ ಜನತೆಯ ಸಹಕಾರ ಉಸಿರಿರುವವರೆಗೂ ಮರೆಯುವುದಿಲ್ಲ – ಪಿಎಸ್‌ಐ ನಿಂಗರಾಜ್ ಕೆ ವೈ
ಬಂಕಾಪುರ: ಶಾಂತಿ ಸುವ್ಯವಸ್ಥೆ ಕಾಪಾಡಲು ತಮ್ಮ ಸೇವಾವಧಿಯಲ್ಲಿ ಬಂಕಾಪುರ ಜನರು ನೀಡಿರುವ ಸಹಕಾರ ಜೀವನ ಉಸಿರಿರುವವರೆಗೂ ಮರೆಯಲ್ಲ ಎಂದು ವರ್ಗಾವಣೆಗೊಂಡ ಪಿಎಸ್‌ಐ ನಿಂಗರಾಜ್ ಕೆ ವೈ ಹೇಳಿದರು.
ಸೋಮವಾರ ಪಟ್ಟಣದ ಹಳ್ಳಿಕೇರಿ ಬಸವಣ್ಣ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ನನ್ನ ಕರ್ತವ್ಯದ ಅವಧಿಯಲ್ಲಿ ಬಂಕಾಪುರದ ಜನತೆ ನೀಡಿದ ಸಹಕಾರ, ಬೆಂಬಲ ಮತ್ತು ನಂಬಿಕೆಗೆ ನಾನು ತುಂಬು ಹೃದಯದಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮ ಸಹಕಾರವಿಲ್ಲದೆ ನಾನು ನನ್ನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಿರಲಿಲ್ಲ ಎಂದರು.
ಇಲ್ಲಿನ ಜನರೊಂದಿಗೆ ಕೆಲಸ ಮಾಡಿದ್ದು ನನಗೆ ಉತ್ತಮ ಅನುಭವ ನೀಡಿದೆ. ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳನ್ನು ಪರಿಹರಿಸಲು ಪ್ರಯತ್ನಿಸಿದ್ದು ನನಗೆ ತೃಪ್ತಿ ನೀಡಿದೆ. ನನ್ನ ಅನುಪಸ್ಥಿತಿಯಲ್ಲಿಯೂ, ಪೊಲೀಸ್ ಇಲಾಖೆಯು ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತದೆ. ಈ ಹಿಂದೆ ಪಟ್ಟಣದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆಗೆ ರಾಜ್ಯದ ನಾಲ್ಕು ಜಿಲ್ಲೆಗಳಿಂದ ಪೊಲೀಸ್ ಬಂದೋಬಸ್ತ್ ನಡೆಯುತಿತ್ತು. ಆದರೆ, ನಾನು ಇಲ್ಲಿಗೆ ಬಂದ ಬಳಿಕ ಜನರಿಂದ ವ್ಯಕ್ತವಾದ ಪ್ರೀತಿ, ವಿಶ್ವಾಸದ ಸಹಕಾರದಿಂದ ಎರಡು ವರ್ಷ,ಕೇವಲ ಎರಡು ಜಿಲ್ಲೆ ಪೊಲೀಸರ ಸಹಕಾರದಿಂದ ವಿಸರ್ಜನೆ ನಡೆದಿದೆ ಇದಕ್ಕೆ ಬಂಕಾಪುರದ ಸಮಸ್ತ ಜನರ ಸಹಕಾರ ಕಾರಣ ಎಂದರು.
ಇದೇ ಸಂಧರ್ಭದಲ್ಲಿ ಹಾವೇರಿಗೆ ವರ್ಗಾವಣೆಯಾದ ಬಂಕಾಪುರ ಪೊಲೀಸ್ ಠಾಣೆ ಪಿಎಸ್ ಐ ಲಿಂಗರಾಜ ಕರಕಣ್ಣವರ ಅವರನ್ನು ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಯವರು ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಪುರಸಭೆ ಸದಸ್ಯ ಸುರೇಶ ಕುರಗೋಡಿ ಮಾತನಾಡಿ ಒಬ್ಬ ಅಧಿಕಾರಿ ಉತ್ತಮವಾಗಿ ಕಾರ್ಯನಿರ್ವಹಿಸಿ ವರ್ಗಾವಣೆಯಾದಾಗ, ಸಾರ್ವಜನಿಕರು ಸಾಮಾನ್ಯವಾಗಿ ಅವರ ಕಾರ್ಯಕ್ಷಮತೆಯನ್ನು ಗುರುತಿಸಿ ಮೆಚ್ಚುತ್ತಾರೆ ಅಂತಹವರ ಸಾಲಿನಲ್ಲಿ ಪಿಎಸ್‌ಐ ನಿಂಗರಾಜ್ ಕೆ ಮುಂಚೂಣಿಯಲ್ಲಿರುತ್ತಾರೆ. ಪಿಎಸ್‌ಐ ನಿಂಗರಾಜ್ ಕೆ ವೈ ರವರ ಕಾರ್ಯವೈಖರಿಯಿಂದ ಪೊಲೀಸ್ ಅಧಿಕಾರಿಗಳ ಬಗ್ಗೆ ಜನರಲ್ಲಿ ಗೌರವ ಹೆಚ್ಚುತ್ತದೆ ಎಂದರು.
ಈ ಸಂಧರ್ಭದಲ್ಲಿ ರಾಮಕೃಷ್ಣ ರಾಯ್ಕರ, ಆಂಜನೇಯ ಗುಡಗೇರಿ, ರಮೇಶ ಸಿದ್ದುನವರ, ರುದ್ರಣ್ಣ ಪವಾಡಿ, ರಾಜು ಹುಲಮನಿ, ರಮೇಶ ಹಂಚಾಟೆ, ಸ್ಮಶಾನ ಸಮಿತಿ ಅಧ್ಯಕ್ಷ ಬಾಪುಗೌಡ್ರ ಮೀನಪ್ಪಗೌಡ್ರ, ಗಂಗಾಧರ ಪೂಜಾರ, ಶಿವಪ್ಪ ಮಾಗಿ, ರವಿ ನರೇಗಲ್ಲ, ರವಿ ಮಾಳಗಿಮನಿ ಮತ್ತಿತರರು ಉಪಸ್ಥಿತರಿದ್ದರು.